Total Pageviews

Friday 27 July 2012

ಜಾರುತಿದೆ ಮನಸು




ಜಾರಿಹೋಗಿದೆ ಮನಸು
ಅನಿಸಿದೆ...
ಜಾದೂವಾಗಿದೆ ನನಗೆ.
ಮೋಡಿ ಮಾಡಿದೆ ಮಳೆಯು
ಮಂದಗಾಳಿಯ ಕಳಿಸಿ.
ಬಿಡದೆ ಕಾದಿದೆ ನೆನಪು
ಕಾರಣಿಲ್ಲದ ಹುರುಪು!!!.

ಒಂಟಿ ಬಾಳಿಗೆ ನೀನು
ಅಂಟಿ ಬರುವೆನು ಎಂದೆ.,
ಗಂಟು ಹಾಕಿದ ಮೇಲೆ
ನಂಟು ಬೆಸೆಯುವುದಂತೆ..
ಮುಗ್ದ ಜೀವಕೆ ನೀನು
ಬೆಟ್ಟದಾಸರೆಯಂತೆ..
ನಿನ್ನ ಕಷ್ಟದೊಳೆಲ್ಲ
ನನಗೂ ಪಾಲಿದೆಯಂತೆ..
ಪ್ರೀತಿ ಕಡಲಿಗೆ ನೀನು
ಭದ್ರ ಸೇತುವೆಯಂತೆ..
ಮನದ ಮುಗಿಲಲಿ ನೀನು
ನಗುವ ನೇಸರನಂತೆ ...

ಚಿಗುರೊ ಬಳ್ಳಿಲಿ
ಹೊಸದು ಮೊಗ್ಗಾದ ಹಾಗೆ,
ತಾಯ ಹೆಸರ ಕೇಳಿ
ಮಗು ಕರೆದ ಹಾಗೆ,
ಮಳೆಯ ಮೋಡವ ಕಂಡು
ನವಿಲು ಕುಣಿಯುವ ಹಾಗೆ,
ನೀರಿಲ್ಲದೆ ಮೀನು
ಚಡಪಡಿಸುವಾ ಹಾಗೆ,
ನಿನ್ನ ಒಲವಿಗೆ ಹೃದಯ
ಮಿಡಿಯುವುದು ಹೀಗೆ...!!!

11 comments:

  1. ಚಿಗುರೊ ಬಳ್ಳಿಲಿ
    ಹೊಸದು ಮೊಗ್ಗಾದ ಹಾಗೆ,
    ತಾಯ ಹೆಸರ ಕೇಳಿ
    ಮಗು ಕರೆದ ಹಾಗೆ,

    xcellent line's.....

    supper...

    keep writting,.,

    ReplyDelete
  2. ನನಗೆ ಗೊತ್ತು ನಿನ್ನ ಮನಸು ಜಾರಿದೆ ಅಂತಾ!

    ReplyDelete
  3. ನಿಜವಾಗಲು ಮನಸು ಅನೋದು ಚಿಕ್ಕ ಮಗು ಇದ್ದ ಹಾಗೇ.....ಸೂಪರ್ ಆಗಿದೆ ಫ್ರೆಂಡ್

    ReplyDelete
    Replies
    1. ಧನ್ಯವಾದ..ಪ್ರೇಮಾ....
      ನನ್ ಮನಸು ಹಾಗೆ ಮಗು ಥರಾನೇ..:)

      Delete
  4. ಜಾರಿಹೋಗಿದೆ ಮನಸು
    ಅನಿಸಿದೆ...
    ಜಾದೂವಾಗಿದೆ ನನಗೆ.
    - ಈ ಕವನಕ್ಕೆ ಇದೇ ನನ್ನ ಪ್ರತಿಕ್ರಿಯೆ,

    ಚೆಂದ ಚೆಂದ..

    ReplyDelete
  5. ಚಿಗುರೊ ಬಳ್ಳಿಲಿ
    ಹೊಸದು ಮೊಗ್ಗಾದ ಹಾಗೆ,
    ತಾಯ ಹೆಸರ ಕೇಳಿ
    ಮಗು ಕರೆದ ಹಾಗೆ,
    ಮಳೆಯ ಮೋಡವ ಕಂಡು
    ನವಿಲು ಕುಣಿಯುವ ಹಾಗೆ,
    ನೀರಿಲ್ಲದೆ ಮೀನು
    ಚಡಪಡಿಸುವಾ ಹಾಗೆ,
    ನಿನ್ನ ಒಲವಿಗೆ ಹೃದಯ
    ಮಿಡಿಯುವುದು ಹೀಗೆ...!

    ಇ ಲೈನ್ ತುಂಬಾ ಇಷ್ಟ ಆತು.. ಹೇಯ್ ನಿಜವಾಗ್ಲೂ.. ಮನಸನ್ನ ಮುದಗೊಳಿಸುವ ಕವನ.. ಅಲ್ಲಾ..ಜಾರುತಿದೆ ಮನಸು.. ಈ ಕವನಕ್ಕೆ ;) .. keep it up..ತುಂಬಾ ಚನ್ನಾಗಿದ್ದು.

    ReplyDelete
  6. ಗಂಟು ಹಾಕಿದ ಮೇಲೆ
    ನಂಟು ಬೆಸೆಯುವುದಂತೆ..

    ಅರಿತಿರದ ಜೀವಗಳು ಜೊತೆಯಾಗುವುದು ಆಗಲೆ.

    ಮುಗ್ದ ಜೀವಕೆ ನೀನು
    ಬೆಟ್ಟದಾಸರೆಯಂತೆ..
    ನಿನ್ನ ಕಷ್ಟದೊಳೆಲ್ಲ
    ನನಗೂ ಪಾಲಿದೆಯಂತೆ..
    ಪ್ರೀತಿ ಕಡಲಿಗೆ ನೀನು
    ಭದ್ರ ಸೇತುವೆಯಂತೆ..
    ಮನದ ಮುಗಿಲಲಿ ನೀನು
    ನಗುವ ನೇಸರನಂತೆ ...

    ಸುಂದರ ಸಾಲುಗಳು...

    ReplyDelete

Thanks