Total Pageviews

Thursday 25 July 2013

ಮನಸು ತುಂಬಿದೆ



ಮನತುಂಬ ಸವಿಗನಸು
ಎದೆತುಂಬ ಭಾವೋನ್ಮಾದ
ಹೊಸದೆನಿಸಿದೆ ಈ ಜಗವು
ಬಣ್ಣವಾಗುತಿದೆ ಬದುಕು
ಸೊಗಸೆನಿತಿಸುದೆ ಈ ಭೂಮಿ
ಆಪ್ತವೆನಿಸಿವೆ ಸಂಬಂಧಗಳು
ಅನಿಸುತಿದೆ ಬದಲಾವಣೆ
ನನ್ನ ತುಂಬಾ......

ಜೊತೆಗಾರನ ಬಾಂಧವ್ಯ
ಅಭಿಮಾನದಕ್ಕರೆಗಳು
ವಾತ್ಸಲ್ಯದಾಳದ ಮಮತೆ
ಕಣ್ಣು ತುಂಬುವ ಪ್ರೇಮ
ಒಟ್ಟಾಗಿ ಕಟ್ಟಿಕೊಟ್ಟಿವೆ
ನೂರ್ಮಡಿಸುವ 

ಗಗನ ಚುಂಬಿಸುವ
ಚೈತನ್ಯ ನನ್ನ ತುಂಬಾ......

ಸತ್ಯ-ಮಿಥ್ಯಗಳ
ಹಿರಿಮೆ-ಅರಿವಿನ ಗೋಜು
ಜಗದಳಲ ಗೊಂದಲಗಳು
ಬೇಡವೆಂದಿದೆ ಅಂತರ್ಯ
ಮರೆತಿರುವೆನೇ ನಾನು
ಜಗದ ಪರಿವ??!!
ಒಲವ ಕಾರ್ಮೋಡ ಕವಿದಿದೆ
ಈಗ ನನ್ನ ತುಂಬಾ......

ಹೃದಯದಲಿ ಪ್ರೀತಿ ಗುಪ್ತಗಾಮಿನಿಯಂತೆ
ಕನವರಿಸುತಲಿ ಹರಿಯುತಿದೆ.
ಬಾನ ಚಂದ್ರನ ಬೇಟಿಗೆ
ಮುಸ್ಸಂಜೆಯಲಿ ಕಡಲು ಹದವಾಗಿ ನಲಿದಂತೆ
ತಲ್ಲಣಿಸಿ ಕಾತರಿಸಿ..
ಅವನು ಬರುವಾ ಹೊತ್ತು
ಹೆಸರಿಲ್ಲದ ಪುಳಕಗಳು
ನನ್ನ ತುಂಬಾ......

8 comments:

  1. ಬದಲಾದ ಭಾವಗಳು ಚೆನ್ನಾಗಿವೆ ವೀಣಾ......... :)

    ReplyDelete
  2. ಇದು ಆರಂಭ, ಒಲುಮೆ ಯಾತ್ರೆಗೆ ಇದು ಮುನ್ನುಡಿ. ನೂರ್ಕಾಲ ನಗುನಗುತಾ ಬಾಳಿ.
    "ರಾಘವೇಂದ್ರ ರಾಘವೇಂದ್ರ ಎನ್ನಿರಿ
    ನಾಮಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ"

    ReplyDelete
    Replies
    1. ಹೊಸ ಬದುಕು ಹೊಸ ಅಲೆಗಳು.. ಒಂದಕ್ಕಿಂತ ಒಂದು ಚಂದ.

      :-D :-)ಒಳ್ಳೆಯ ಸಲಹೆ :-P

      ಧನ್ಯವಾದ..

      Delete
  3. ಏನೇನೋ ತುಂಬಾ ಬದಲಾವಣೆಗಳು......
    ಬದುಕಿನಲ್ಲಿ ಬರಹದಲ್ಲಿ ಭಾವದಲ್ಲಿ... ಎಲ್ಲೆಲ್ಲೂ.........

    ಸಾಗಲಿ ಸಾಗಲಿ.... ಓದುವ ಖುಷಿ ನಮ್ಮದು.....

    ReplyDelete
    Replies
    1. ಬದಲಾವಣೆ ಜಗ ನಿಯಮ..

      ಸಾಗುತಿದೆ ಬದುಕು ಹಾಗೆ ಸುಮ್ಮನೆ ...

      ಧನ್ಯವಾದ ರಾಘುಜೀ..

      Delete

Thanks